Saturday, June 2, 2007

ಸಲಾಡ್ ಮತ್ತು ಕೋಸಂಬರಿಗಳು

ಪಲ್ಯಗಳು

ಗೊಜ್ಜುಗಳು

ಚಟ್ನಿಗಳು

1) ಕೊತ್ತಂಬರಿ ಸೊಪ್ಪಿನ ಚಟ್ನಿ.(4-5 ಜನರಿಗೆ)

ಬೇಕಾಗುವ ವಸ್ತುಗಳು:- ಕೊತ್ತಂಬರಿ ಸೊಪ್ಪು ೧ ಕಪ್, ತೆಂಗಿನತುರಿ ಅರ್ಧ ಕಪ್, ಹಸಿ ಬೆಳ್ಳುಳ್ಳಿ ೨ ಬೀಜ, ಹಸಿಮೆಣಸು ೪-೫, ಉಪ್ಪು ೧ ಚಮಚ,ಹುಣಸೆಹಣ್ಣು ಸ್ವಲ್ಪ, ಒಗ್ಗರಣ್ಣೆಗೆ ಎಣ್ಣೆ ೧ ಚಮಚ, ಸಾಸಿವೆ ಅರ್ಧ ಚಮಚ, ಒಣಮೆಣಸು ೧.

ವಿಧಾನ:- ಕೊತ್ತಂಬರಿ ಸೊಪ್ಪನ್ನು ತೊಳೆದು ಶುದ್ದ ಮಾಡಿಕೊಂಡು, ತೆಂಗಿನತುರಿ, ಹಸಿಬೆಳ್ಳುಳ್ಳಿ, ಹಸಿಮೆಣಸು, ಹುಳಿ, ಉಪ್ಪು ಹಾಕಿ ಚಟ್ನಿಯಂತೆ ರುಬ್ಬಿ, ಸ್ವಲ್ಪವೇ ನೀರು ಸೇರಿಸಿ ಸಾಸಿವೆ ಒಣಮೆಣಸಿನ ಒಗ್ಗರಣೆ ಕೊಡಿ. ಈ ಚಟ್ನಿ ಊಟದ ಜೊತೆಯಲ್ಲದೇ ದೋಸೆ ಇಡ್ಲಿಯೊಂದಿಗೂ ರುಚಿ.

ತಂಬುಳಿಗಳು.

1) ಕೊತ್ತಂಬರಿ ಸೊಪ್ಪಿನ ತಂಬುಳಿ.

ಬೇಕಾಗುವ (೫-೬ ಜನರಿಗೆ) ವಸ್ತುಗಳು :- ಕೊತ್ತಂಬರಿ ೧ ಕಪ್, ಕಾಯಿತುರಿ ಅರ್ಧ ಕಪ್, ಹಸಿಮೆಣಸು ೨-೩, ಸಿಹಿಮೊಸರು ಅಥವಾ ಮಜ್ಜಿಗೆ ೪ ಕಪ್,ಉಪ್ಪು ೨-೩ ಚಮಚ, ಜೀರಿಗೆ ಕಾಲು ಚಮಚ, ತುಪ್ಪ ಅರ್ಧ ಚಮಚ, ಅರ್ಧ ಒಣಮೆಣಸು.

ವಿಧಾನ:- ಕೊತ್ತಂಬರಿ ಸೊಪ್ಪು ಬೇರು ಮತ್ತು ಬಲಿತ ದಂಟುಗಳಿಂದ ಬೇರ್ಪಡಿಸಿ, ಎಳೆಯ ದಂಟು ಮತ್ತು ಸೊಪ್ಪನ್ನು ತೆಗೆದು ತೊಳೆದುಕೊಂಡು, ಹಸಿಮೆಣಸು - ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ಉಪ್ಪು ಮಜ್ಜಿಗೆ ಬೆರಸಿ, ತುಪ್ಪದಲ್ಲಿ ಜೀರಿಗೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ.