Saturday, June 2, 2007

ಚಟ್ನಿಗಳು

1) ಕೊತ್ತಂಬರಿ ಸೊಪ್ಪಿನ ಚಟ್ನಿ.(4-5 ಜನರಿಗೆ)

ಬೇಕಾಗುವ ವಸ್ತುಗಳು:- ಕೊತ್ತಂಬರಿ ಸೊಪ್ಪು ೧ ಕಪ್, ತೆಂಗಿನತುರಿ ಅರ್ಧ ಕಪ್, ಹಸಿ ಬೆಳ್ಳುಳ್ಳಿ ೨ ಬೀಜ, ಹಸಿಮೆಣಸು ೪-೫, ಉಪ್ಪು ೧ ಚಮಚ,ಹುಣಸೆಹಣ್ಣು ಸ್ವಲ್ಪ, ಒಗ್ಗರಣ್ಣೆಗೆ ಎಣ್ಣೆ ೧ ಚಮಚ, ಸಾಸಿವೆ ಅರ್ಧ ಚಮಚ, ಒಣಮೆಣಸು ೧.

ವಿಧಾನ:- ಕೊತ್ತಂಬರಿ ಸೊಪ್ಪನ್ನು ತೊಳೆದು ಶುದ್ದ ಮಾಡಿಕೊಂಡು, ತೆಂಗಿನತುರಿ, ಹಸಿಬೆಳ್ಳುಳ್ಳಿ, ಹಸಿಮೆಣಸು, ಹುಳಿ, ಉಪ್ಪು ಹಾಕಿ ಚಟ್ನಿಯಂತೆ ರುಬ್ಬಿ, ಸ್ವಲ್ಪವೇ ನೀರು ಸೇರಿಸಿ ಸಾಸಿವೆ ಒಣಮೆಣಸಿನ ಒಗ್ಗರಣೆ ಕೊಡಿ. ಈ ಚಟ್ನಿ ಊಟದ ಜೊತೆಯಲ್ಲದೇ ದೋಸೆ ಇಡ್ಲಿಯೊಂದಿಗೂ ರುಚಿ.

No comments: